ಕೊವಿಡ – ೧೯ ಸಮಯದ ಆನಲೈನ ತರಗತಿಯ ಅನುಭವ

ಪ್ರಸ್ತಾವನೆ

ಕರೋನಾ ವೈರಸ್ ಒಂದು ಪ್ರಾಣ ಹಾನಿ ಉಂಟು ಮಾಡುವಂತಹ ವೈರಸ್ಆಗಿದೆ .ಈ ಸೊಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆಗಳಿಲ್ಲದ ಕಾರಣ ಮಕ್ಕಳ ಹಿತ ದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಿಸಲಾಯಿತು.

ಆನಲೈನ ತರಗತಿ ನಡೆಸುವ ಕುರಿತಾದ ವಿಚಾರಗಳು:

ಕರೋನಾ ವೈರಸ್ ನಿಂದಾಗಿ ಶಾಲೆಗಳೆಲ್ಲ ಮುಚ್ಚಲ್ಪಟ್ಟಾಗ ಎಲ್ಲ ಶಾಲೆಗಳು ಆನಲೈನ್ ತರಗತಿಗೆ ಮೊರೆ ಹೋದವು. ಆದರೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ
ಭಾಗದವರಾಗಿದ್ದು ,ಅವರ ಹತ್ತಿರ ಮೊಬೈಲನ ಯಾವುದೇ ವ್ಯವಸ್ಥೆ ಇಲ್ಲದಿರುವುದು ನಮ್ಮ ವಿದ್ಯಾದಾನ ಶಾಲೆಯ ಶಿಕ್ಷಕರಿಗೆ ಈ ಆನಲೈನ ತರಗತಿ ನಡೆಸುವುದು ಒಂದು ದೊಡ್ದ ಸವಾಲಾಗಿ ಪರಿಣಮಿಸಿತು.

ಆಗ ನಮ್ಮ ಶಾಲೆಯ ಅಧ್ಯಕ್ಷರಾದ ಶ್ರೀಯುತ ಚಂದ್ರಶೇಖರ ಸರ್ ಅವರ ಸಹಾಯದಿಂದ ಮತ್ತು ನಮ್ಮ ಶಾಲೆಯ ಮಕ್ಕಳ ಪಾಲಕರ ಸಹಕಾರದಿಂದ , ನಾವು ಎಲ್ಲ ಶಿಕ್ಷಕರು ಸಹ ಆನಲೈನ ಶಿಕ್ಷಣಕ್ಕೆ ಸಿದ್ದರಾಗಿಯೇ ಬಿಟ್ಟೆವು.

ಆನಲೈನ ಶಿಕ್ಷಣದ ಪರಿಣಾಮ:

ಕೊರೊನಾ ನಾವು ಕೆಲಸ ಮಾಡೋ ರೀತಿಯನ್ನೇ ಬದಲಿಸಿದೆ ಎಂದರೆ ಸುಳ್ಳಾಗದು .
· ಶಿಕ್ಷಕರು ಕೆಲಸ ಮಾಡುವ ರೀತಿ ಬದಲಾಗಿದೆ ,ಕೆಲಸದಲ್ಲಿತಂತ್ರಜ್ಞಾನದ ಬಳಕೆ ಹೆಚ್ಚಾಗಿ ,ಹೊಸ ಹೊಸ ವಿಧಾನಗಳನ್ನುಅನುಸರಿಸಲು ಸಹಾಯಕವಾಗಿದೆ.

· ಮಕ್ಕಳು ತಮ್ಮ ಜ್ಞಾನ ಮತ್ತು ಕೌಶಲದ ನಡುವಿನ ಅಂತರವನ್ನು ತಿಳಿದುಕೊಂಡು ತಮ್ಮಲ್ಲಿರುವ ಜ್ಞಾನವನ್ನು ಕೌಶಲಭರಿತ ಕೆಲಸಗಳಿಗೆ ಬಳಸಿಕೊಳ್ಳುವಂತೆ ವಿದ್ಯಾದಾನ
ಶಾಲೆಯ ಶಿಕ್ಷಕರು ಮಕ್ಕಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ .

ಆನಲೈನ ಶಿಕ್ಷಣವು ಅಂತಿಮವಾಗಿ ಶಾಲಾ ಶಿಕ್ಷಣದ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ

ಆನಲೈನ ಶಿಕ್ಷಣದಿಂದ ಶಿಕ್ಷಕರು ಮತ್ತು ಮಕ್ಕಳು ಹೆಚ್ಚು ರಚನಾತ್ಮಕವಾಗಿದ್ದಾರೆ.

ನಮ್ಮ ಎಲ್ಲ ಶಿಕ್ಷಕರಿಗೆ ಆನಲೈನ ತರಗತಿ ನಡೆಸುವ ವೇಳೆ ನಮಗೆ ಹಲವಾರು ತೊಂದರೆಗಳು ಎದುರಾದವು .

ಆ ಎಲ್ಲ ತೊಂದರೆಗಳನ್ನು ಎದುರಿಸಿ ನಾವು ಎಲ್ಲ ವಿದ್ಯಾದಾನ ಶಾಲೆಯ ಶಿಕ್ಷಕರು ಇದರಲ್ಲ್ಲಿ ಯಶಸ್ವಿಯಾದೆವು .ಅದು ಹೇಗೆ ಯಶಸ್ವಿಯಾಯಿತು ಮತ್ತು ಹೇಗೆ ನಡೆಯುತ್ತಿದೆ ಎನ್ನುವುದರ ಬಗ್ಗೆ ಒಂದು ಸಣ್ಣ ಪಯಣದ ಕೆಲವು ಚಿತ್ರಗಳು ಇಲ್ಲಿವೆ.
LR6rEhrnlSygN0lznxvFkjUux7rq5D5IdamdZDheHZ

cLVvUQ2EjQfqmysuZIhP8TfwfN-7vSM3ZM3CKBaBb1WbeBcAmjALhCmL

BY,
Vijaya ,Bramarambika, Asha, Poornima ,Deepa